Monday, May 19, 2008

ದಿ.ಅಳಿಕೆ ರಾಮಯ್ಯ ರೈ ಸಂಸ್ಮರಣೆ


ಪುತ್ತೂರಿನ ಕರ್ನಾಟಕ ಯಕ್ಷಭಾರತಿ ಆರನೇ ಬಾರಿಗೆ ದೆಹಲಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಹೊಸದಿಲ್ಲಿಯ ತುಳುನಾಡು ಅಭಿವೃದ್ಧಿ ವೇದಿಕೆಯ ಬಂಟ್ಸ್ ಕಲ್ಚರಲ್ ಅಸೋಸಿಯೇಶನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗೋಕರ್ಣ ಮಂಡಲ, ದೆಹಲಿ ಕರ್ನಾಟಕ ಸಂಘ ಮತ್ತು ದೆಹಲಿ ಮಿತ್ರ ಇವುಗಳ ಸಹಯೋಗದೊಂದಿಗೆ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ `ದಿ.ಅಳಿಕೆ ರಾಮಯ್ಯ ರೈ ಸಂಸ್ಮರಣೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಕ್ಷಭಾರತಿ ಸಂಚಾಲಕ ಮತ್ತು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿ ಅಳಿಕೆಯವರನ್ನು ನೆನಪು ಮಾಡಿಕೊಂಡರು.
ರಾಮಯ್ಯ ರೈ ಯಕ್ಷಗಾನ ಸವ್ಯಸಾಚಿ. ಪಾರಂಪರಿಕ ಒಂದು ದೇಶೀ ಕಲೆಗೆ ತನ್ನ ವೈಯಕ್ತಿಕ ಛಾಪನ್ನು ಬೆರೆಸಿ ಸೃಜನಶೀಲ ಅಭಿವ್ಯಕ್ತಿ ನೀಡಿದ ಮೇರು ಕಲಾವಿದ ಎಂದವರು ಬಣ್ಣಿಸಿದರು.
ಅಳಿಕೆ ಸಂಸ್ಮರಣೆ ಬಳಿಕ ಕರ್ನಾಟಕ ಯಕ್ಷಭಾರತಿ, ಪುತ್ತೂರು ತಂಡವು ನಡೆಸಿಕೊಟ್ಟ ಕಾರ್ಯಕ್ರಮ `ಭೀಷ್ಮ ವಿಜಯ' ತಾಳಮದ್ದಳೆ'. ಸುಮಾರು ಎರಡೂವರೆ ತಾಸು ಜರಗಿತು. ಈ ಯಕ್ಷಗಾನ ಕೂಟ ಕಲಾವಿದರ ವಾದವೈಭವದೊಂದಿಗೆ ದೆಹಲಿ ಶೋತೃಗಳಲ್ಲಿ ಕೌತುಕ ಮೂಡಿಸಿತು. ಕುಕ್ಕುವಳ್ಳಿ, ಶ್ರೀಧರ ಡಿ.ಎಸ್, ಗಣರಾಜ ಕುಂಬಳೆ, ಡಾ.ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಆಶುಭಾಷಣದ ವಿಶಿಷ್ಠ ಮಾದರಿಗಳನ್ನು ತೆರೆದಿಟ್ಟರು.
ಎಂ.ಎಂ.ಸಿ ರೈ, ಡಾ.ಬಿ.ಬಿ. ಅಡ್ಕೋಳಿ, ರಾಧಾಭಟ್ ಪೂರಕ ಪಾತ್ರ ವಹಿಸಿದರು. ತೆಂಕು ಬಡಗುಗಳ ಪ್ರತಿಭಾನ್ವಿತ ಭಾಗವತ ನಾರಾಯಣ ಶಬರಾಯರ ಹಾಡುಗಾರಿಕೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

`ಯಕ್ಷ ಪ್ರಮೀಳೆ' ದಿ. ಲೋಲಮ್ಮ ಪಚ್ಚನಾಡಿ


ಸುಮಾರು 19 ವರ್ಷಗಳ ಕಾಲ ನಿರಂತರ ಯಕ್ಷಗಾನ ಬಯಲಾಟವನ್ನು ಆಡಿಸುತ್ತಾ, ಯಕ್ಷಗಾನ ಕಲಾವಿದರನ್ನು ಗೌರವಿಸವ ಮೂಲಕ ಪ್ರೋತ್ಸಾಹಿಸಿ ಯಕ್ಷಗಾನಕ್ಕೆ ವಿಶಿಷ್ಟ ರೀತಿಯ ಪ್ರೋತ್ಸಾಹವನ್ನು ದಿ. ಲೋಲಮ್ಮ ಪಚ್ಚನಾಡಿ ನೀಡಿದ್ದರು.
ಮಂಗಳೂರಿನ ಮರೋಳಿ ಗ್ರಾಮದಲ್ಲಿ ದಿ.ತೋಮ ಪೂಜಾರಿ ಮತ್ತು ದಿ.ಪೂವಪ್ಪೆ ಪೂಜಾರ್ತಿ ದಂಪತಿ ಪುತ್ರಿಯಾಗಿ ಜನಿಸಿದ ಲೋಲಮ್ಮ ಪಚ್ಚನಾಡಿ ಶ್ರೀ ದೇವಿ ಬಗ್ಗೆ ಅಪಾರ ಭಕ್ತಿವುಳ್ಳವರಾಗಿದ್ದರು.
1968ರಲ್ಲಿ ಪದವಿನಂಗಡಿಯ ಸ್ವಸ್ತಿ ಗೇರು ಬೀಜ ಕಾಖರ್ಾನೆ ಮುಚ್ಚಲ್ಪಟ್ಟಾಗ ಅಲ್ಲಿ ಉದ್ಯೋಗಿಯಾಗಿದ್ದ ಇವರು ಇತರ ಸಹೋದ್ಯೋಗಿಗಳೊಂದಿಗೆ ಕಾಖರ್ಾನೆ ಮತ್ತೆ ತೆರೆದುಕೊಂಡರೆ ಶ್ರೀ ಕಟೀಲು ಮೇಳದ ಬಯಲಾಟ ಆಡಿಸುವುದಾಗಿ ಹರಕೆ ಹೇಳಿಕೊಂಡರು.
ಹರಕೆ ಹೇಳಿದ ಫಲವೋ ಎಂಬಂತೆ ಗೇರು ಬೀಜ ಕಾಖರ್ಾನೆ ಮತ್ತೆ ಆರಂಭಗೊಂಡಿತು. ಹರಕೆ ಸಂದಾಯ ಮಾಡಲು ಒಬ್ಬೊಬ್ಬರು ಒಂದೊಂದು ಕಾರಣಗಳಿಂದ ಹೊಣೆಗಾರಿಕೆ ಜಾರಿಸಿಕೊಂಡಾಗ ಇವರೇ ಮುಂದೆ ನಿಂತು ಹರಕೆಯ ಸೇವೆಯಾಟವನ್ನು ನಡೆಸಿದರು. ಮುಂದೆ ವರ್ಷಂಪ್ರತಿ ನಡೆಯುವಂತಾಗಿ ಒಟ್ಟು 39 ಹರಕೆ ಆಟವನ್ನು ಆಡಿಸಿದ ಲೋಲಮ್ಮ 40ನೇ ಆಟದ ಸಂದರ್ಭದಲ್ಲಿ ಕಟೀಲಮ್ಮನ ಪಾದ ಸೇರಿದ್ದರು.
ಕಿತ್ತು ತಿನ್ನುವ ಬಡತನದ ಮಧ್ಯೆಯೂ ಧನಸಂಗ್ರಹಮಾಡಿ 19 ವರ್ಷಗಳ ತನಕ ಪದವಿನಂಗಡಿಯಲ್ಲಿ ಬಯಲಾಟ ಆಡಿಸಿದ್ದು, 1983ರಲ್ಲಿ ಶ್ರೀ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ವೇದಮೂತರ್ಿ ಶ್ರಿ ಗೋಪಾಲಕೃಷ್ಣ ಆಸ್ರಣ್ಣರನ್ನು ಕರೆಸಿ ಪದವಿನಂಗಡಿಗೆ `ದೇವಿನಗರ' ಎಂಬ ಹೆಸರನ್ನಿರಿಸಿದರು.
ಪಡ್ರೆ ಚಂದು, ಜನಾರ್ದನ ಜೋಗಿ ಮಂಜೇಶ್ವರ, ಸಂಪಾಜೆ ಶೀನಪ್ಪ ರೈ, ಕುಬಣೂರು ಶ್ರೀಧರ ರಾವ್ರವರಿಗೆ ಸನ್ಮಾನ, ಪಡ್ರೆ ಕುಮಾರರಿಗೆ ಗೌರವ ಪುರಸ್ಕಾರ, ಕೊರಗಪ್ಪ ಭಾಗವತರಿಗೆ ಸಂಮಾನ, ನೇಪಥ್ಯ ಕಲಾವಿದ ಕಲಾವಿದ ಕರಿಯಣ್ಣರಿಗೆ ಗೌರವ ಪುರಸ್ಕಾರ, ಸಂಜೀವ ಚೌಟರಿಗೆ ಇವರು ಸನ್ಮಾನ ನಡೆಸಿದ್ದರು.
ಲೋಲಮ್ಮನವರ ಕಲಾಸೇವೆಯನ್ನು ಕಂಡ ಹಲವಾರು ಸಂಘಸಂಸ್ಥೆಗಳೂ ಇವರನ್ನು ಗೌರವಿಸಿವೆ. ಸಂಸ್ಕಾರ ಭಾರತಿ ಮಂಗಳೂರು, ಪದವಿನಂಗಡಿ ದುಗರ್ಾ ಸೇವಾ ಸಮಿತಿ, ಶ್ರೀ ವಿಘ್ನೇಶ್ವರ ಯಕ್ಷಗಾನ ಮಂಡಳಿ ಪದವಿನಂಗಡಿ, ಪಚ್ಚನಾಡಿ ನಾಗರಿಕರು ಸೇರಿದಂತೆ ಇನ್ನೂ ಹಲವಾರು ಸಂಘಗಳು ಇವರನ್ನು ಗೌರವಿಸಿವೆ. ಮಂಗಳೂರಿನ ಪುರಭವನದಲ್ಲಿ ನಡೆದ ಮಹಿಳಾ ಸಮ್ಮೇಳನದಲ್ಲಿ ಲೋಲಮ್ಮರವರಿಗೆ `ಯಕ್ಷ ಪ್ರಮೀಳ ಪ್ರಶಸ್ತಿ'ಯನ್ನೂ ನೀಡಿ ಗೌರವಿಸಲಾಗಿತ್ತು.
ಇಳಿಹರೆಯ 50ರ ವಯಸ್ಸಿನ ಬಳಿಕ ಬಯಲಾಟ ಸೇವೆಯನ್ನು ಆರಂಭಿಸಿ ಛಲ ಮತ್ತು ಆತ್ಮ ವಿಶ್ವಾಸದಿಂದ ನಡೆಸುತ್ತಾ ಬಂದಿರುವ ಲೋಲಮ್ಮ ಪಚ್ಚನಾಡಿ 2008ರ ಫೆ.25ರಂದು ದಿವಂಗತರಾದರು. ಇವರ ಕಲಾಸೇವೆಯನ್ನು ಇವರ ಮಕ್ಕಳು, ಮೊಮ್ಮಕ್ಕಳು ಮುಂದುವರಿಸಿದ್ದಾರೆ.

Thursday, April 24, 2008

ಮಿಜಾರ್ ಅಣ್ಣಪ್ಪರಿಗೆ ಗ್ರಾಮೋತ್ಸವ ಪ್ರಶಸ್ತಿ


ಅಜೆಕಾರಿನ ಕುಪರ್ಾಡಿ ಯುವ ವೃಂದದಿಂದ ನೀಡಲ್ಪಡುತ್ತಿರುವ ಗ್ರಾಮೋತ್ಸವ ಪ್ರಶಸ್ತಿಗೆ ಈ ಬಾರಿ ಯಕ್ಷಗಾನದ ಹಿರಿಯ ಕಲಾವಿದ ಮಿಜಾರು ಅಣ್ಣಪ್ಪರನ್ನು ಆಯ್ಕೆ ಮಾಡಲಾಗಿದೆ.
ಗ್ರಾಮೋತ್ಸವ ಯುವ ಗೌರವಕ್ಕೆ ರಾಷ್ಟ್ರೀಯ ಕ್ರೀಡಾ ಪಟು ನಯನ್ ಕುಮಾರ್ ಜೋಗಿ ಮುನಿಯಾಲು, ಉದ್ಯಮಿ ಸಂಘಟಕ ನಕುಲ್ದಾಸ್ ಪೈ, ಸುನೀಲ್ ಮೋಟಾರ್ಸ್ನ ಬಸ್ ನಿವರ್ಾಹಕ ಸುರೇಶ್, ದಸರಾ ಕ್ರೀಡಾಕೂಟದಲ್ಲಿ ವಿಭಾಗಮಟ್ಟದವರೆಗೆ ಸ್ಪಧರ್ಿಸಿದ ವಾಲಿಬಾಲ್ ಆಟಗಾತರ್ಿ ಅಪರ್ಿತಾ ಅಜೆಕಾರ್, ಅಕ್ಷತಾ ಹೆಮರ್ುಂಡೆ ಈ ಐವರು ಪಾತ್ರರಾಗಿದ್ದಾರೆ.
ಏ.26ರಂದು ಕುಪರ್ಾಡಿ ಬೊಬ್ಬರ್ಯ ಬಳಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅಜೆಕಾರಿನ ಕುಪರ್ಾಡಿ ಯುವ ವೃಂದದಿಂದ ನೀಡಲ್ಪಡುತ್ತಿರುವ ಗ್ರಾಮೋತ್ಸವ ಪ್ರಶಸ್ತಿಗೆ ಈ ಬಾರಿ ಯಕ್ಷಗಾನದ ಹಿರಿಯ ಕಲಾವಿದ ಮಿಜಾರು ಅಣ್ಣಪ್ಪರನ್ನು ಆಯ್ಕೆ ಮಾಡಲಾಗಿದೆ.
ಗ್ರಾಮೋತ್ಸವ ಯುವ ಗೌರವಕ್ಕೆ ರಾಷ್ಟ್ರೀಯ ಕ್ರೀಡಾ ಪಟು ನಯನ್ ಕುಮಾರ್ ಜೋಗಿ ಮುನಿಯಾಲು, ಉದ್ಯಮಿ ಸಂಘಟಕ ನಕುಲ್ದಾಸ್ ಪೈ, ಸುನೀಲ್ ಮೋಟಾರ್ಸ್ನ ಬಸ್ ನಿವರ್ಾಹಕ ಸುರೇಶ್, ದಸರಾ ಕ್ರೀಡಾಕೂಟದಲ್ಲಿ ವಿಭಾಗಮಟ್ಟದವರೆಗೆ ಸ್ಪಧರ್ಿಸಿದ ವಾಲಿಬಾಲ್ ಆಟಗಾತರ್ಿ ಅಪರ್ಿತಾ ಅಜೆಕಾರ್, ಅಕ್ಷತಾ ಹೆಮರ್ುಂಡೆ ಈ ಐವರು ಪಾತ್ರರಾಗಿದ್ದಾರೆ.
ಏ.26ರಂದು ಕುಪರ್ಾಡಿ ಬೊಬ್ಬರ್ಯ ಬಳಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Tuesday, April 22, 2008

ಬಲಿಪ ನಾರಾಯಣ ಭಾಗವತರಿಗೆ ಗುರುಪೂಜಾ ಪುರಸ್ಕಾರ


ಕೇರಳ ರಾಜ್ಯದ ಸಂಗೀತ ನಾಟಕ ಅಕಾಡೆಮಿಯ 2007ನೇ ಸಾಲಿನ ಗುರುಪೂಜಾ ಪುರಸ್ಕಾರಕ್ಕೆ ತೆಂಕುತಿಟ್ಟಿನ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರನ್ನು ಆಯ್ಕೆ ಮಾಡಲಾಗಿದೆ.
ಕನರ್ಾಟಕದ ವಿಶಿಷ್ಟ ಜಾನಪದ ಕಲೆಯಾಗಿರುವ ಯಕ್ಷಗಾನದ ತೆಂಕುತಿಟ್ಟು ಮತ್ತು ಬಡಗು ತಿಟ್ಟಿನಲ್ಲಿ ಕನರ್ಾಟಕವನ್ನು ಹೊರತು ಪಡಿಸಿ ಹೊರರಾಜ್ಯದ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಥಮ ಭಾಗವತರೆಂಬುದು ಬಲಿಪರಿಗೆ ಸಲ್ಲುವ ಹಿರಿಮೆಯಾಗಿದೆ.
ಪ್ರಶಸ್ತಿ ವಿತರಣಾ ಸಮಾರಂಭವು ಮೇ 2ರಂದು ಸಂಜೆ 5.30ಕ್ಕೆ ಕೇರಳದ ತೃಶ್ಯೂರಿನ ಸಂಗೀತ ನಾಟಕ ಅಕಾಡೆಮಿಯ ಸಭಾ ಮಂದಿರದಲ್ಲಿ ಜರಗಲಿದೆ.

Wednesday, April 9, 2008

ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ಟರಿಗೆ ಪಾತಾಳ ಯಕ್ಷಕಲಾ ಪ್ರತಿಷ್ಠಾನದ ಪ್ರಶಸ್ತಿ


ಯಕ್ಷಗಾನದ ಹಿರಿಯ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ ಹೆಸರಿನಲ್ಲಿ ಕೊಡಮಾಡಲಾಗುತ್ತಿರುವ ಪಾತಾಳ ಯಕ್ಷಕಲಾ ಪ್ರತಿಷ್ಠಾನದ ಪ್ರಶಸ್ತಿಗೆ ಈ ಬಾರಿ ಹಾಸ್ಯಗಾರ ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರಕಟಿಸಿದ್ದಾರೆ.
ಏ.14ರಂದು ರಾತ್ರಿ 8.30ಕ್ಕೆ ಕಾಸರಗೋಡಿನ ಎಡನೀರು ಶ್ರೀ ಕೃಷ್ಣ ರಂಗಮಂಟಪದಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಡನೀರು ಸಂಸ್ಥಾನದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಕೆ.ಅನಂತಕೃಷ್ಣ ವಹಿಸುವರು. ಪ್ರಧಾನ ಅಭ್ಯಾಗತರಾಗಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭಾಗವಹಿಸಲಿರುವರು ಎಂದವರು ತಿಳಿಸಿದ್ದಾರೆ.
ಪ್ರಶಸ್ತಿಯು 5 ಸಾವಿರ ನಗದು, ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಕಳೆದೆರಡು ವರ್ಷಗಳಲ್ಲಿ ಕಟೀಲು ಪುರುಷೋತ್ತಮ ಭಟ್ಟ, ಕಡಬ ಸಾಂತಪ್ಪ, ಪೆರುವೊಡಿ ನಾರಾಯಣ ಭಟ್ರವರಿಗೆ ಪಾತಾಳ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Tuesday, April 1, 2008

ನಂದನೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಕಲಿಕಾ ಶಿಬಿರ

ಆಧುನಿಕ ಪಾಶ್ಚಾತ್ಯ ಸಂಸ್ಕೃತಿಯ ವೇಗಕ್ಕೆ ಯಕ್ಷಗಾನ ಅಳಿವಿನ ಅಂಚಿಗೆ ಸಾಗುವ ಭಯಉಂಟಾಗಿದೆ, ಆದರಿಂದ ಯಕ್ಷಗಾನದ ಉಳಿವಿಗೆ ಶ್ರಮಿಸಬೇಕು , ಕಲೆಯನ್ನು ಬೆಳೆಸುವ ಪ್ರಯತ್ನ ಮಾಡಬೇಕೆಂದು ಪದ್ಮಾನಾಭಯ್ಯ ಶ್ಯಾನುಭೋಗ್ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಪಿ ಅಭಿಪ್ರಾಯಪಟ್ಟರು.
ಅವರು ಪಣಂಬೂರು ನಂದನೇಶ್ವರ ದೇವಸ್ಥಾನದಲ್ಲಿ ಪಣಂಬೂರು ಪದ್ಮನಾಭಯ್ಯ ಶ್ಯಾನುಭೋಗ್ ಶತಮಾನೋತ್ಸವ ಸಮಿತಿಯ ಸಹಾಭಾಗಿತ್ವದೊಂದಿಗೆ ಆರಂಭವಾದ ಯಕ್ಷಗಾನ ಕಲಿಕಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ದಿವಂಗತ ಪದ್ಮನಾಭಯ್ಯ ಶ್ಯಾನುಭೋಗ್ ನಂದನೇಶ್ವರ ದೇವಳದಲ್ಲಿ ಸಾಂಸ್ಕೃತಿಕ ಧಾರ್ಮಿಕ ಕಲೆಯ ಬೀಜವನ್ನು ಬಿತ್ತಿದರು, ಅದು ಈಗ ಮರವಾಗಿ ವಿವಿಧ ಶಾಖೆಗಳಾಗಿ ಬೆಳೆದಿದೆ ಎಂದು ಅವರು ಹೇಳೀದರು.
ದೇವಳದ ಆಡಳಿತ ಮೊಕ್ತೇಸರ ಪಿ. ರತ್ನಾಕರ ರಾವ್ ಶಿಬಿರವನ್ನು ಉದ್ಘಾಟಿಸಿದರು. ನವಮಂಗಳೂರು ಯಕ್ಷಗಾನ ಮಂಡಳಿಯ ಅಧ್ಯಕ್ಷ ಸುಧಾಕರ ಕಾಮತ್, ಮೊಕ್ತೇಸರರಾದ ರಾಮಚಂದ್ರ ಹೆಬ್ಬಾರ್, ಸಾಧುಪೂಜಾರಿ, ಕಲಾವಿದ ಶ್ರೀಧರ ಐತಾಳ್, ಉದ್ಯಮಿ ಸತೀಶ್ ಬೈಕಂಪಾಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಎಂ ಶಂಕರನಾರಾಯಣ ಸ್ವಾಗತಿಸಿ ಮಧುಕರ ಭಾಗವತ್ ವಂದಿಸಿದರು.
ಸುಮಾರು 50 ರಿಂದ 60 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು,

Monday, March 17, 2008

ಹಿಮ್ಮೇಳ ಕಲಾವಿದ ಕಡಬ ನಾರಾಯಣ ಆಚಾರ್ಯ ನಿಧನ

ಯಕ್ಷಗಾನದ ಪ್ರಸಿದ್ಧ ಚೆಂಡೆಮದ್ದಳೆಗಾರ ಕಡಬ ನಾರಾಯಣ ಆಚಾರ್ಯ(49) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.
ಸುರತ್ಕಲ್ ಮಹಾಮ್ಮಾಯಿ ಮೇಳದಲ್ಲಿ ಚೆಂಡೆಮದ್ದಳೆಗಾರರಾಗಿ 25 ವರ್ಷ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ 2 ವರ್ಷ ತರಬೇತಿ ನೀಡಿ ಅಪಾರ ಶಿಷ್ಯವರ್ಗ ದವರನ್ನು ತಯಾರಿಸಿದ್ದರು. ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಸಹಿತ ಹಲವಾರು ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದವು.
ತಾಯಿ, ಪತ್ನಿ, 5 ಗಂಡು, 1 ಹೆಣ್ಣು, ಇಬ್ಬರು ಸಹೋದರರು, ಓರ್ವ ತಂಗಿ ಸಹಿತ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಚೆಂಡೆ ಮದ್ದಳೆಯಲ್ಲಿ ಪ್ರಸಿದ್ಧರಾಗಿದ್ದ ಆಚಾರ್ಯರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಪಾರ

Tuesday, February 26, 2008

ಯಕ್ಷ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ

ದಿ.ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟಿ ಯಕ್ಷ ಪ್ರತಿಷ್ಠಾನದ ಆರನೇ ವರ್ಷದ `ಯಕ್ಷಪ್ರತಿಷ್ಠಾನ ಪ್ರಶಸ್ತಿ' ಪ್ರದಾನ ಸಮಾರಂಭ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜರುಗಿತು.
ವೇಷಧಾರಿಗಳಾದ ಧರ್ಣಪ್ಪ ಶೆಟ್ಟಿ ಪೂಂಜಾಲಕಟ್ಟೆ, ಲಕ್ಷ್ಮಣ ಶೆಟ್ಟಿ ಅಳಿಕೆ, ಅರುವ ಕೊರಗಪ್ಪ ಶೆಟ್ಟಿ ಮತ್ತು ಮೇಳದ ಚೌಕಿ, ವಿದ್ಯುದ್ದೀಪಗಳ ಸುವ್ಯವಸ್ಥೆಗಳಿಗಾಗಿ ಗೋಪಾಲ ಪೂಜಾರಿ ಕುರಿಯಾಡಿ ಅವರಿಗೆ ಪ್ರತಿಷ್ಠಾನದ ವತಿಯಿಂದ ಶಾಲು, ಸ್ಮರಣಿಕೆ ಪ್ರಶಸ್ತಿ ಫಲಕ ಹಾಗೂ ತಲಾ 5000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೌಟ ಪ್ರತಿಷ್ಠಾನದ ಅಧ್ಯಕ್ಷ ಡಿ.ಕೆ. ಚೌಟ ವಹಿಸಿದ್ದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಶಸ್ತಿ ವಿಜೇತ ಹಿರಿಯ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಅಭಿನಂದನಾ ಭಾಷಣ ಮಾಡಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟರ ಸಂಸ್ಮರಣೆ ಮಾಡಿದರು
ಪ್ರತಿಷ್ಠಾನದ ಅಧ್ಯಕ್ಷ ಸುರತ್ಕಲ್ ಜಯರಾಮ ಶೆಟ್ಟಿ ಸ್ವಾಗತಿಸಿದರು. ಚಂದ್ರಶೇಖರ ಬಿ, ವಿದ್ವಾನ್ ಕೃಷ್ಣ ಭಟ್, ಮಂಚಿ ದೂಮಣ್ಣ ರೈ ಮತ್ತು ಪುಷ್ಪರಾಜ ಕುಕ್ಕಾಜೆ ಸನ್ಮಾನ ಪತ್ರ ವಾಚಿಸಿದರು. ಡಾ.ಎನ್. ನಾರಾಯಣ ಶೆಟ್ಟಿ, ಕೆ. ಸಾಯಿನಾಥ ಪೂಂಜ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ರಾಘವ ಚೌಟ ವಂದಿಸಿದರು. ಆನಂತರ ಪ್ರಸೂದನ ಕಾಳಗ ಯಕ್ಷಗಾನ ಬಯಲಾಟ ನಡೆಯಿತು.

Monday, February 25, 2008

ಏಡ್ಸ್ : ಜನಜಾಗೃತಿಗೆ ಯಕ್ಷಗಾನ ಪ್ರದರ್ಶನ

ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಕೆ. ಮೋಹನ್ ನಿದರ್ೇಶನದ ಏಡ್ಸ್ ಕುರಿತು ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವಂತಹ ಯಕ್ಷಗಾನ ಪ್ರದರ್ಶನ ಅಭಿಯಾನವು ಫೆಬ್ರವರಿ 25 ರಂದು ಬೈಂದೂರು ಸಮೀಪದ ಶೀರೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಅನಂತರ ಮಾರ್ಚ್ 3 ರ ವರೆಗೆ ಕ್ರಮವಾಗಿ ಬೈಂದೂರು, ಕಿರಿಮಂಜೇಶ್ವರ, ಮರವಂತೆ, ಆಲೂರು, ನಾಡ, ಕಂಡ್ಲೂರು ಮತ್ತು ಶಂಕರನಾರಾಯಣದಲ್ಲಿ ಪ್ರದರ್ಶನಗಳು ನಡೆಯಲಿವೆ. ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು ಮತ್ತು ಕನರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿ, ಬೆಂಗಳೂರು ಮತ್ತು ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಸಂಯೋಜಿಸಲ್ಪಟ್ಟಿದೆ.
ಸುದರ್ಶನ ಉರಾಳ್, ನಾಗರಾಜ್, ಕಡ್ಲೆ ಗಣಪತಿ, ಲಂಬೋದರ ಹೆಗ್ಡೆ, ಮಾಧವ, ಭಾಸ್ಕರ, ವಿಶ್ವನಾಥ ಶೆಟ್ಟಿ, ಗಣೇಶ ಉಪ್ಪುಂದ, ತಮ್ಮಣ್ಣ ಗಾಂವ್ಕರ್, ಉದಯ, ನರಸಿಂಹ ತುಂಗ, ಇವರು ಕಲಾವಿದರಾಗಿ ಅಭಿನಯಿಸಿ ಜನಸಾಮಾನ್ಯರಿಗೆ ಏಡ್ಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಆರೋಗ್ಯಾಧಿಕಾರಿಗಳಾದ ಡಾ. ಎಂ.ಆರ್. ನಾಯ್ಕ್, ಡಾ. ರಾಮರಾವ್, ಆರೋಗ್ಯ ಶಿಕ್ಷಣಾಧಿಕಾರಿ ಅಪ್ಪುಸ್ವಾಮಿ ಮತ್ತು ಪ್ರದರ್ಶನ ನೀಡುವ ಯಕ್ಷದೇಗುಲ ತಂಡದ ಮುಖ್ಯಸ್ಥ ಸುದರ್ಶನ ಉರಾಳರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು.

Saturday, February 23, 2008

ಇಂತಹ ಸ್ವಾಭಿಮಾನ ಅತೀ ಅಗತ್ಯ

ದೀಪಕ್ ರಾವ್ ಪೇಜಾವರರ ವಿವಾದಿತ ಚಿತ್ರ
ಯಕ್ಷಗಾನ ಕಲಾವಿದರ ದುರುಪಯೋಗ, ಶೋಷಣೆ ನಡೆಯುತ್ತಿದೆ ಎಂಬ ಅಸಮಾಧಾನದ ಕೇಳಿಬರುತ್ತಿರುವಾಗ ಕಲವು ಕಡೆ ಗಟ್ಟಿ ಧ್ವನಿಗಳು ಕೇಳಿಸುತ್ತಿರುವುದು ಸಮಾಧಾನಕರವಾದ ಅಂಶವಾಗಿದೆ.
ಯಕ್ಷಗಾನ ಹವ್ಯಾಸಿ ಕಲಾವಿದ ದೀಪಕ್ ರಾವ್ ಪೇಜಾವರ ತನ್ನ ಯಕ್ಷಗಾನದ ಚಿತ್ರವನ್ನು ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಯಾವುದೇ ಕಲಾವಿದರ ವೇಷಗಳನ್ನು ಅವರ ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಸರಿಯಲ್ಲ. ಈ ಬಗ್ಗೆ ದೀಪಕ್ ಅಸಮಾಧಾನವನ್ನು ವ್ಯಕ್ತಪಡಿಸಿ ಯಕ್ಷಗಾನದ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ.
ಇತ್ತೀಚೆಗೆ ಯಕ್ಷಗಾನ ವೇಷಗಳು ರಂಗಸ್ಥಳ ಬಿಟ್ಟು ಹಾದಿ ಬೀದಿಗಳಲ್ಲಿ ಕಾಣಸಿಗುತ್ತವೆ. ಯಕ್ಷಗಾನದ ಮಾನವನ್ನು ಬೀದಿಯಲ್ಲಿ ಹರಾಜು ಮಾಡುತ್ತಿದೆ. ಒಂದು ಹೆಜ್ಜೆ ಮುಂದೆ ಎಂಬಂತೆ ಯಕ್ಷಗಾನ ವೇಷಗಳು ಗುಡ್ಡವನ್ನೂ ಹತ್ತಿವೆ. ಚಲನ ಚಿತ್ರವೊಂದರ ಹಾಡಿನ ದೃಶ್ಯದಲ್ಲಿ ಯಕ್ಷಗಾನದ ವೇಷಗಳು ಯಕ್ಷಗಾನದ ಚೌಕಟ್ಟನ್ನು ಮೀರಿ ಡಿಸ್ಕೋ ಹಾಡಿಗೆ ಹೆಜ್ಜೆ ಹಾಕಿದೆ. ಯಕ್ಷಗಾನದ ಬಗ್ಗೆ ಯೋಗ್ಯ ಚಲನ ಚಿತ್ರವನ್ನು ಮಾಡದೇ ಇರುವವರು ನಾಯಕ ನಾಯಕಿಯರ ಡ್ಯುಯೆಟ್ ಹಾಡಿಗೆ ಹೆಜ್ಜೆ ಹಾಕಿಸಿರುವುದು ಎಷ್ಟು ಸರಿ?
ಈ ಕಲಾವಿದರಾರೂ ಯಕ್ಷಗಾನದ ಮರ್ಯಾದೆಯ ಬಗ್ಗೆ ಆಲೋಚಿಸಿರಲಿಲ್ಲವೇ?

Sunday, February 17, 2008

ಕಲ್ಲಾಡಿ ಪ್ರಶಸ್ತಿ ಪ್ರಕಟ


ದಿ.ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟಿ ಯಕ್ಷ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿ ನಾಲ್ಕು ಮಂದಿ ಹಿರಿಯ ಕಲಾವಿದರಿಗೆ ನೀಡುವ ಪ್ರಶಸ್ತಿಯನ್ನು ಈ ಬಾರಿ ತೆಂಕುತಿಟ್ಟಿನ ಅಗ್ರಮಾನ್ಯ ವೇಷಧಾರಿಗಳಾದ ಧರ್ಣಪ್ಪ ಶೆಟ್ಟಿ ಪೂಂಜಾಲಕಟ್ಟೆ, ಅಳಿಕೆ ಲಕ್ಷ್ಮಣ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ ಮತ್ತು ಮೇಳದ ಚೌಕಿ ಕುರಿಯಾಡಿ ಗೋಪಾಲ ಪೂಜಾರಿ ಇವರಿಗೆ ನ್ರಿತಿಷ್ಠಾನದ ಸಲಹಾ ಸಮಿತಿ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 17 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿಯನ್ನು ಚೌಟ ಪ್ರತಿಷ್ಠಾನದ ಅಧ್ಯಕ್ಷ ಡಿ.ಕೆ.ಚೌಟ ನೀಡಲಿದ್ದಾರೆ. ವಿಟ್ಲ ಕ್ಷೇತ್ರದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದವರು ವಿವರಿಸಿದರು.