Tuesday, April 1, 2008

ನಂದನೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಕಲಿಕಾ ಶಿಬಿರ

ಆಧುನಿಕ ಪಾಶ್ಚಾತ್ಯ ಸಂಸ್ಕೃತಿಯ ವೇಗಕ್ಕೆ ಯಕ್ಷಗಾನ ಅಳಿವಿನ ಅಂಚಿಗೆ ಸಾಗುವ ಭಯಉಂಟಾಗಿದೆ, ಆದರಿಂದ ಯಕ್ಷಗಾನದ ಉಳಿವಿಗೆ ಶ್ರಮಿಸಬೇಕು , ಕಲೆಯನ್ನು ಬೆಳೆಸುವ ಪ್ರಯತ್ನ ಮಾಡಬೇಕೆಂದು ಪದ್ಮಾನಾಭಯ್ಯ ಶ್ಯಾನುಭೋಗ್ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಪಿ ಅಭಿಪ್ರಾಯಪಟ್ಟರು.
ಅವರು ಪಣಂಬೂರು ನಂದನೇಶ್ವರ ದೇವಸ್ಥಾನದಲ್ಲಿ ಪಣಂಬೂರು ಪದ್ಮನಾಭಯ್ಯ ಶ್ಯಾನುಭೋಗ್ ಶತಮಾನೋತ್ಸವ ಸಮಿತಿಯ ಸಹಾಭಾಗಿತ್ವದೊಂದಿಗೆ ಆರಂಭವಾದ ಯಕ್ಷಗಾನ ಕಲಿಕಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ದಿವಂಗತ ಪದ್ಮನಾಭಯ್ಯ ಶ್ಯಾನುಭೋಗ್ ನಂದನೇಶ್ವರ ದೇವಳದಲ್ಲಿ ಸಾಂಸ್ಕೃತಿಕ ಧಾರ್ಮಿಕ ಕಲೆಯ ಬೀಜವನ್ನು ಬಿತ್ತಿದರು, ಅದು ಈಗ ಮರವಾಗಿ ವಿವಿಧ ಶಾಖೆಗಳಾಗಿ ಬೆಳೆದಿದೆ ಎಂದು ಅವರು ಹೇಳೀದರು.
ದೇವಳದ ಆಡಳಿತ ಮೊಕ್ತೇಸರ ಪಿ. ರತ್ನಾಕರ ರಾವ್ ಶಿಬಿರವನ್ನು ಉದ್ಘಾಟಿಸಿದರು. ನವಮಂಗಳೂರು ಯಕ್ಷಗಾನ ಮಂಡಳಿಯ ಅಧ್ಯಕ್ಷ ಸುಧಾಕರ ಕಾಮತ್, ಮೊಕ್ತೇಸರರಾದ ರಾಮಚಂದ್ರ ಹೆಬ್ಬಾರ್, ಸಾಧುಪೂಜಾರಿ, ಕಲಾವಿದ ಶ್ರೀಧರ ಐತಾಳ್, ಉದ್ಯಮಿ ಸತೀಶ್ ಬೈಕಂಪಾಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಎಂ ಶಂಕರನಾರಾಯಣ ಸ್ವಾಗತಿಸಿ ಮಧುಕರ ಭಾಗವತ್ ವಂದಿಸಿದರು.
ಸುಮಾರು 50 ರಿಂದ 60 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು,

No comments: